ಕಾರವಾರ : ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಖಾಲಿಯಿರುವ 6 ಉಪ ನಿರ್ದೇಶಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಭೂಸೇನೆಯಲ್ಲಿ ಮೇಜರ್/ಲೆಫೀನೆಂಟ್ ಕರ್ನಲ್ ಹಾಗೂ ನೌಕಸೇನೆ ಮತ್ತು ವಾಯುಸೇನೆಯಲ್ಲಿ ತತ್ಸಮಾನ, ರ್ಯಾಂಕನಿಂದ ಬಿಡುಗಡೆ/ನಿವೃತಿ ಹೊಂದಿರಬೇಕು, ಪರಿಶಿಷ್ಟ ಜಾತಿ -1, ಪರಿಶಿಷ್ಟ ಪಂಗಡ-1 ಸಾಮಾನ್ಯ ಅಭ್ಯರ್ಥಿ-3, ಪ್ರವರ್ಗ-1 ಹುದ್ದೆ ಮೀಸಲಾಗಿರುತ್ತದೆ. ವಯೋಮಿತಿ ದಿನಾಂಕ 1-1-2024 ಕ್ಕೆ 52 ವರ್ಷ ಮೀರಿರಬಾರದು. ವಿದ್ಯಾಹರ್ತೆ ಪದವೀಧರರಾಗಿರಬೇಕು. ಮತ್ತು 10 ನೇ ತರಗತಿ/ತತ್ಸಮಾನ ತರಗತಿಯಲ್ಲಿ ಒಂದು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ವ್ಯಾಸಂಗ ಮಾಡಿ ತೇರ್ಗಡೆಯಾಗಿರಬೇಕು.
ಆಸಕ್ತರು ಅರ್ಜಿಗಳನ್ನು ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬೆಂಗಳೂರು ಕಚೇರಿಯಿಂದ ಪಡೆದು ಸೆ. 30 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು ಎಂದು ಕಾರವಾರ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.